ಖಿರ್ವಾರ್ ( ಖಿರ್ವಾರಾ, ಖೇರ್ವಾರಿ ಅಥವಾ ಕಲರಿ ಎಂದೂ ಕರೆಯುತ್ತಾರೆ) ಭಾರತದ ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ಖಾರ್ವಾರ್ ಬುಡಕಟ್ಟು ಜನಾಂಗದವರು ಮಾತನಾಡುವ ದ್ರಾವಿಡ ಭಾಷೆ. ಗ್ಲೋಟೊಲಾಗ್ ಇದನ್ನು ವರ್ಗೀಕರಿಸದ ದ್ರಾವಿಡ ಭಾಷೆ ಎಂದು ಪಟ್ಟಿ ಮಾಡಿದೆ. ಖಿರ್ವಾರ್ ಭಾರತದ ಅತಿ ದೊಡ್ಡ ಬುಡಕಟ್ಟು ಗುಂಪು ಹಾಗೂ ಗೊಂಡ್‌ ಸಮುದಾಯದ ಉಪ-ಗುಂಪಾಗಿದೆ. ಐತಿಹಾಸಿಕವಾಗಿ, ಗೊಂಡರು ಮೂಲ ಭಾರತೀಯ ಬುಡಕಟ್ಟುಗಳ ಪ್ರಮುಖ ಗುಂಪು. ೧೫೦೦ ರ ದಶಕದಲ್ಲಿ, ಹಲವಾರು ಗೊಂಡ ರಾಜವಂಶಗಳನ್ನು ಸ್ಥಾಪಿಸಿದರು ಮತ್ತು ಗೊಂಡ ರಾಜರು ೧೫೯೨ ರಲ್ಲಿ ಮುಸ್ಲಿಂ ಸೈನ್ಯದಿಂದ ವಶಪಡಿಸಿಕೊಳ್ಳುವವರೆಗೂ ಹಿಂದೂ ರಾಜಕುಮಾರರಂತೆ ಆಳ್ವಿಕೆ ನಡೆಸಿದರು. ೧೭೦೦ ರ ಸಮಯದಲ್ಲಿ, ಗೊಂಡರು ಮರಾಠ ರಾಜರಿಂದ ಎಲ್ಲಾ ಅಧಿಕಾರವನ್ನು ಕಳೆದುಕೊಂಡರು. ಮರಾಠರ ಆಳ್ವಿಕೆಯು ಮುಂದಿನ ಶತಮಾನದಲ್ಲಿ, ಎಲ್ಲಾ ಗೊಂಡ ಪ್ರದೇಶವನ್ನು ಅತಿಕ್ರಮಿಸಿತು ಮತ್ತು ಜನರು ತಮ್ಮ ಅಧಿಕಾರದಿಂದ ಸಂಪೂರ್ಣವಾಗಿ ಹೊರಹಾಕಲ್ಪಟ್ಟರು. ಇಂದು, ಖಿರ್ವಾರ್ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ಸುರ್ಗುಜಾ ಜಿಲ್ಲೆಯಲ್ಲಿ ಅನೇಕರು ಹಿಂದಿ ಬುಡಕಟ್ಟುಗಳ ನಡುವೆ ವಾಸಿಸುತ್ತಿದ್ದಾರೆ. ಕೆಲವರು ತಮ್ಮ ಸ್ವಂತ ಭಾಷೆಯಾದ ಖಿರ್ವಾರಿ ಜೊತೆಗೆ ಸ್ಥಳೀಯ ಹಿಂದಿ ಉಪಭಾಷೆಯನ್ನು ಮಾತನಾಡುತ್ತಾರೆ. == ಉಲ್ಲೇಖಗಳು ==